RTO New Rules: ದೇಶಾದ್ಯಂತ ಹಳೆಯ ಬೈಕ್ ಮತ್ತೆ ಕಾರು ಇದ್ದವರಿಗೆ RTO ಕಡೆಯಿಂದ ಹೊಸ ರೂಲ್ಸ್! ಏನದು ತಿಳಿಯಿರಿ.

RTO New Rules: ದೇಶಾದ್ಯಂತ ಹಳೆಯ ಬೈಕ್ ಮತ್ತೆ ಕಾರು ಇದ್ದವರಿಗೆ RTO ಕಡೆಯಿಂದ ಹೊಸ ರೂಲ್ಸ್! ಏನದು ತಿಳಿಯಿರಿ.

ಕೆಲವೇ ತಿಂಗಳುಗಳ ಹಿಂದೆ ದೇಶದ ರಾಜಧಾನಿ ದೆಹಲಿಯಲ್ಲಿ 10 ವರ್ಷಕ್ಕಿಂತ ಹಳೆಯ ಡೀಸೆಲ್ ವಾಹನಗಳನ್ನು ವಶಪಡಿಸಿಕೊಳ್ಳಲಾಗುತ್ತಿರುವ ಸುದ್ದಿ ಮಾಧ್ಯಮಗಳಲ್ಲಿ ನೀವೆಲ್ಲರೂ ಗಮನಿಸಿರಬಹುದು. ಇದರ ಜತೆಗೆ ಹಲವು ವಿಡಿಯೋ ತುಣುಕುಗಳಲ್ಲಿ ಗೊತ್ತಾಗಿರುವ ಮಾಹಿತಿ ಪ್ರಕಾರ ಹಳೆ ಟೊಯೊಟಾ ಫಾರ್ಚುನರ್ ಅನ್ನು ಫಾರ್ಚುನರ್ ಲೆಜೆಂಡ್ ಕಾರಾಗಿ ಪರಿವರ್ತಿಸಿದವರ ಕಾರುಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಜಪ್ತಿ ಮಾಡಿ ಕೊಂಡೊಯ್ಯುತ್ತಿದ್ದಾರೆ.

RTO New Rules

ವೈರಲ್ ಆಗಿರುವ ವೀಡಿಯೊದಲ್ಲಿ, ಮೊದಲ ತಲೆಮಾರಿನ ಟೊಯೊಟಾ ಫಾರ್ಚುನರ್ ಕಾರನ್ನು ಪರಿವರ್ತಿಸಲಾಗಿದೆ ಮತ್ತು ಈ ಕಾರನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿದುಬಂದಿದೆ. ರಸ್ತೆ ಬದಿಯಲ್ಲಿಯೇ ಅಧಿಕಾರಿಗಳು ಗುರುತಿಸಿ ವಶಪಡಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದ್ದು, ಮುಂದಿನ ದಿನಗಳಲ್ಲಿ ಇಂತಹ ಪರಿವರ್ತನಾ ವಾಹನಗಳನ್ನು ಜಪ್ತಿ ಮಾಡುವ ಕಾರ್ಯ ತೀವ್ರಗೊಳ್ಳುವ ಮುನ್ಸೂಚನೆ ಇದಾಗಿದೆ ಎಂದು ಹೇಳಬಹುದು.

ಫಾರ್ಚುನರ್ ಕಾರನ್ನು ಪರಿವರ್ತಿಸಿ ಈ ಕಾರನ್ನು ವಶಪಡಿಸಿಕೊಳ್ಳಲಾಗಿದೆ ಎಂಬ ಮಾಹಿತಿ ತಿಳಿದು ಬಂದಿದೆ. ರಸ್ತೆ ಬದಿಯಲ್ಲಿಯೇ ಅಧಿಕಾರಿಗಳು ಗುರುತಿಸಿ ವಶಪಡಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದ್ದು, ಮುಂದಿನ ದಿನಗಳಲ್ಲಿ ಇಂತಹ ಪರಿವರ್ತನಾ ವಾಹನಗಳನ್ನು ಜಪ್ತಿ ಮಾಡುವ ಕಾರ್ಯ ತೀವ್ರಗೊಳ್ಳುವ ಮುನ್ಸೂಚನೆ ಇದಾಗಿದೆ ಎಂದು ಹೇಳಬಹುದು. ದೇಶದ ರಾಜಧಾನಿ ದೆಹಲಿಯಲ್ಲಿ ನಡೆಯುತ್ತಿರುವ ಈ ಕಾರ್ಯ ಮುಂದಿನ ದಿನಗಳಲ್ಲಿ ಕರ್ನಾಟಕ ರಾಜ್ಯದಲ್ಲೂ ವ್ಯಾಪಕವಾಗಿ ನಡೆದರೆ ಅಚ್ಚರಿಪಡಬೇಕಿಲ್ಲ.

ಈ ಮೂಲಕ ವಾಹನ ನಿಯಮ ಉಲ್ಲಂಘಿಸುವ ರೀತಿಯಲ್ಲಿ ಹಳೆ ಆವೃತ್ತಿಯ ಫಾರ್ಚುನರ್ ಕಾರುಗಳನ್ನು ಹೊಸ ಮಾದರಿಗೆ ಪರಿವರ್ತಿಸಿ ಅಂತಹ ವಾಹನಗಳನ್ನು ವಶಪಡಿಸಿಕೊಳ್ಳುವಂತಹ ಕೆಲಸಗಳನ್ನು ಇಲಾಖೆ ಮಾಡುತ್ತಿದ್ದು, ಮುಂದಿನ ದಿನಗಳಲ್ಲಿ ಎಲ್ಲರೂ ಕೂಡ ಈ ಶಿಕ್ಷೆಯನ್ನು ಎದುರಿಸಬೇಕಾಗಬಹುದು.

ಅನೇಕ ಸ್ಥಳಗಳಲ್ಲಿ ಕೆಲವು ಆಫ್ಟರ್ ಮಾರ್ಕೆಟ್ ಅಂಗಡಿಗಳಲ್ಲಿ ಟೈಪ್ 1 ಮತ್ತು ಟೈಪ್ 2 ರ ಹಳೆಯ ಫಾರ್ಚುನರ್ ಕಾರುಗಳನ್ನು ಮಾರ್ಪಡಿಸಲಾಗುತ್ತಿದೆ. ಹಳೇ ಕಾರುಗಳು ಅದರಲ್ಲೂ 10 ವರ್ಷಕ್ಕಿಂತ ಹಳೆಯದಾದ ವಾಹನಗಳು ಈ ರೀತಿ ಮಾರ್ಪಾಡು ಮಾಡಿ ರಸ್ತೆಗೆ ಬಂದರೆ ಮುಂದಿನ ದಿನಗಳಲ್ಲಿ ನಿಮ್ಮ ವಾಹನಗಳು ಅಧಿಕಾರಿಗಳ ವಶವಾಗುವುದು ನಿಶ್ಚಿತ ಎಂದೇ ಹೇಳಬಹುದು.