Revenue Department: ಈಗಾಗಲೇ ಆಸ್ತಿ ಇದ್ದವರು ಹಾಗೂ ಜಮೀನು ಖರೀದಿ ಮಾಡೋರಿಗೆ ಹೊಸ ರೂಲ್ಸ್! ನೋಡಿ.
ಕರ್ನಾಟಕ ಕಂದಾಯ ಇಲಾಖೆ: ಇಂದು ಭೂ ಆಸ್ತಿ ಬಹಳ ಪ್ರಾಮುಖ್ಯತೆ ಪಡೆದುಕೊಂಡಿದೆ ಮತ್ತು ಸಾಕಷ್ಟು ಬೇಡಿಕೆ ಇರುತ್ತದೆ. ಆದ್ದರಿಂದ ಇಂದು ಆಸ್ತಿಗೆ ಸಂಬಂಧಿಸಿದಂತೆ ಹೆಚ್ಚಿನ ವಂಚನೆಗಳು ಕಂಡುಬರುತ್ತವೆ. ಇದಕ್ಕೆ ಕಡಿವಾಣ ಹಾಕಲು ಸರ್ಕಾರವೂ ಹಲವು ರೀತಿಯ ಕ್ರಮಗಳನ್ನು ಜಾರಿಗೊಳಿಸುತ್ತಿದೆ. ಇದೀಗ ಹೊಸ ನಿಯಮ ಜಾರಿಗೆ ತಂದಿದ್ದು, ನವೀಕರಣದ ಮಾಹಿತಿ ಇಲ್ಲಿದೆ.
ಮಾಹಿತಿ ಡಿಜಿಟಲೀಕರಣ
ಇಂದು ಭೂ ದಾಖಲೆಗಳ ಡಿಜಿಟಲೀಕರಣಕ್ಕೆ ಹೆಚ್ಚಿನ ಒತ್ತು ನೀಡಲಾಗಿದ್ದು, ನಕಲಿ ದಾಖಲೆ ಸೃಷ್ಟಿಸಿ ವಂಚನೆಗೆ ಕಡಿವಾಣ ಹಾಕಲು ಸರ್ಕಾರ ಈ ನಿಯಮ ಜಾರಿಗೆ ತಂದಿದೆ. ಭೂ ದಾಖಲೆಗಳು RTC. ಜಂಟಿ ಆಸ್ತಿಗಳ ಎಲ್ಲಾ ಮಾಹಿತಿಯು ಆನ್‌ಲೈನ್‌ನಲ್ಲಿ ಸಾರ್ವಜನಿಕರಿಗೆ ಲಭ್ಯವಾಗಲಿದ್ದು, ಇದರಿಂದ ಭೂ ದಾಖಲೆಗಳಿಗಾಗಿ ಕಂದಾಯ ಇಲಾಖೆ ಕಚೇರಿಗೆ ಅಲೆದಾಡುವುದು ಸಹ ತಪ್ಪುತ್ತದೆ.
ನಕಲಿ ದಾಖಲೆ ಕಡಿವಾಣ
ಇಂದು ಸುಳ್ಳು ದಾಖಲೆ ನೀಡಿ ಆಸ್ತಿ ಮಾರಾಟ, ಆಸ್ತಿ ಖರೀದಿ ಇತ್ಯಾದಿ ಸಮಸ್ಯೆ ಹೆಚ್ಚಾಗಿದೆ. ಈ ವಂಚನೆಗೆ ಕಡಿವಾಣ ಹಾಕಲು ಭೂ ದಾಖಲೆಗಳ ಸಂಪೂರ್ಣ ಡಿಜಿಟಲೀಕರಣ ಪ್ರಕ್ರಿಯೆ ಜಾರಿಗೊಳಿಸಲಾಗಿದ್ದು, ಈಗಾಗಲೇ ಶೇ 95ರಷ್ಟು ಆಕಾರ್ ಬಂಡ್‌ಗಳ ಡಿಜಿಟಲೀಕರಣ ಪೂರ್ಣಗೊಂಡಿದೆ.
ಕೆಲಸ ಸುಲಭ ವಾಗಲಿದೆ
ಇದು ಆಸ್ತಿಯನ್ನು ನೋಂದಾಯಿಸಲು ಮತ್ತು ಮಧ್ಯವರ್ತಿಗಳ ಮೇಲಿನ ಅವಲಂಬನೆ, ನಕಲಿ ದಾಖಲೆಗಳಿಂದ ಭ್ರಷ್ಟಾಚಾರ ಮತ್ತು ವಂಚನೆಯಂತಹ ಎಲ್ಲಾ ಸಮಸ್ಯೆಗಳನ್ನು ಪರಿಹರಿಸಲು ಸುಲಭವಾಗುತ್ತದೆ, ಸರ್ವರ್ ಸಮಸ್ಯೆಗಳು ಇತ್ಯಾದಿ.
ಈ ಕೆಲಸ ಕಡ್ಡಾಯ
ಇಂದು ಭೂಮಿಗೆ ಸಂಬಂಧಿಸಿದ ವಂಚನೆ ತಡೆಯಲು ಭೂ ಮಾಲೀಕರ ಆರ್‌ಟಿಸಿಗೆ ಆಧಾರ್ ಲಿಂಕ್ ಮಾಡುವುದನ್ನು ಕಡ್ಡಾಯಗೊಳಿಸಲಾಗಿದೆ. ಈಗಾಗಲೇ ಕಂದಾಯ ಗ್ರಾಮಗಳ ಆಡಳಿತಾಧಿಕಾರಿಗಳು ತಮ್ಮ ವ್ಯಾಪ್ತಿಯ ಗ್ರಾಮಗಳಿಗೆ ತೆರಳಿ ಇ-ಕೆವೈಸಿಗೆ ಆಧಾರ್ ಲಿಂಕ್ ಮಾಡುವ ಬಗ್ಗೆ ಮಾಹಿತಿ ನೀಡುತ್ತಿದ್ದು, ಈ ರೀತಿ ಮಾಡಿದರೆ ಆಸ್ತಿ ವಿವರಗಳ ಜತೆಗೆ ಮಾಲೀಕರ ವಾಹನ ಡೇಟಾ ಬೇಸ್ ನಲ್ಲಿ ಸಂಗ್ರಹವಾಗುತ್ತದೆ.
- ನೊಂದಣಿ ಮಾಡಲು ಈ ಕೆಲಸ ಕಡ್ಡಾಯ
- ಗುರುತಿನ ಪ್ರಮಾಣ ಪತ್ರ
- ಆಧಾರ್ ಕಾರ್ಡ್
- ಪ್ಯಾನ್ ಕಾರ್ಡ್
- ಪ್ರಾಪರ್ಟಿ ನೋಂದಣಿ ಪ್ರತಿ
- ಪವರ್ ಆಫ್ ಅನಾರ್ನಿ
- ಮುನ್ಸಿಪಾಲ್ ತೆರಿಗೆ ಪಾವತಿಸಿರುವ ಬಿಲ್
- ಎನ್‌ಒಸಿ
- ಮುದ್ರಾಂಕ ಮತ್ತು ನೋಂದಣಿ ಶುಲ್ಕ ಪಾವತಿಸಿರುವ ರಸೀದಿ ಇತ್ಯಾದಿ ಬೇಕು.