Property Rules: ತಂದೆ ಮಾರಿದ ಆಸ್ತಿಯನ್ನ ಮತ್ತೆ ಪಡೆಯಬಹುದು! ಹೇಗೆ ಅಂತ ತಿಳಿಯಿರಿ.
ಕೃಷಿ ಭೂಮಿ ಅಲ್ಲದ ಎಲ್ಲ ಕಡೆ ಮನೆ, ಕಟ್ಟಡ ಕಟ್ಟುವುದು ಇಂದು ಸಾಮಾನ್ಯ ಸಂಗತಿಯಾಗಿದೆ. ಹಾಗಾಗಿ ಲಭ್ಯವಿರುವ ಭೂಮಿಯ ಮಟ್ಟ ತೀರಾ ಕಡಿಮೆ ಎಂದು ಹೇಳಬಹುದು. ಈ ನಿಟ್ಟಿನಲ್ಲಿ ಭೂಮಿ ಪಿತ್ರಾರ್ಜಿತವಾಗಿ ಬಂದರೆ ಅನುಕೂಲವಾಗುತ್ತದೆ. ಅದೇ ರೀತಿ ಪಿತ್ರಾರ್ಜಿತ ಆಸ್ತಿಯಲ್ಲಿ ಮಕ್ಕಳಿಗೆ ಪಾಲು, ಮೊಮ್ಮಕ್ಕಳಿಗೆ ಪಾಲು ಸಿಗಲಿದೆ. ತಂದೆ ಆಸ್ತಿಯನ್ನು ಪಾಲು ಕೊಡದೆ ಮಾರಲು ಸಾಧ್ಯವೇ?, ಆಸ್ತಿ ಮಾರಿದರೆ ಮಕ್ಕಳು ಏನು ಮಾಡಬಹುದು, ತಂದೆ ಮಾರಾಟ ಮಾಡಿದ ಆಸ್ತಿಯನ್ನು ತಂದೆ ಎಷ್ಟು ದಿನ ಪಡೆಯಬಹುದು ಎಂಬುದನ್ನು ಇಂದಿನ ಲೇಖನದ ಮೂಲಕ ತಿಳಿಸುತ್ತೇವೆ.
ಪಿತ್ರಾರ್ಜಿತ ಆಸ್ತಿಯಲ್ಲಿ ಮಕ್ಕಳಿಗೂ ಪಾಲು ನೀಡಬೇಕು ಎಂಬ ನಿಯಮವಿದ್ದರೂ ವಂಚಕರೂ ಇದ್ದಾರೆ. ಪಹಣಿಯಲ್ಲಿ ಮಕ್ಕಳ ಹೆಸರನ್ನು ನಮೂದಿಸದೆ ಪಿತ್ರಾರ್ಜಿತ ಆಸ್ತಿಯನ್ನು ಮಾರಾಟ ಮಾಡುವಾಗ, ಒಬ್ಬರ ಹೆಸರನ್ನು ಮಾತ್ರ ನೀಡಿದರೆ, ತಂದೆಗೆ ಆಸ್ತಿಯನ್ನು ಏಕಮಾತ್ರ ಮಾಲೀಕತ್ವದಲ್ಲಿ ಮಾರಾಟ ಮಾಡುವ ಹಕ್ಕು ಸಿಗುತ್ತದೆ. ಆಸ್ತಿಯನ್ನು ಮಕ್ಕಳಿಗೆ ನೀಡದೆ ಬೇರೆಯವರಿಗೆ ಮಾರಾಟ ಮಾಡಿದರೆ ಆ ಆಸ್ತಿಯನ್ನು ಕಾನೂನಾತ್ಮಕವಾಗಿ ಮರಳಿ ಪಡೆಯಲು ಅವಕಾಶವಿರುತ್ತದೆ.
ಈ ಹಿಂದೆ ತಂದೆ ಮಕ್ಕಳ ಗಮನಕ್ಕೆ ಬಾರದೆ ಆಸ್ತಿ ಮಾರಾಟ ಮಾಡುವ ಪ್ರಮಾಣ ಹೆಚ್ಚಾಗಿತ್ತು, ನಂತರ ವೈಷಮ್ಯ ಉಂಟಾದಾಗ ಪಂಚೆ ಮಧ್ಯಸ್ಥಿಕೆ ವಹಿಸಿ ಪರಿಹಾರ ಕಂಡುಕೊಳ್ಳುತ್ತಿದ್ದರು. ಈಗ ಎಲ್ಲವೂ ಕಾನೂನು ಹೋರಾಟವಾಗಿದೆ. ಅಪ್ರಾಪ್ತ ವಯಸ್ಕನು ಮೊದಲು ಆಸ್ತಿಯನ್ನು ಕೇಳುವ ಹಕ್ಕನ್ನು ಹೊಂದಿರುವುದಿಲ್ಲ. 18 ವರ್ಷ ವಯಸ್ಸಿನ ನಂತರ, ಮಕ್ಕಳು ಆಸ್ತಿಯ ಹಕ್ಕು ಪಡೆಯುತ್ತಾರೆ. 18 ವರ್ಷ ಮೇಲ್ಪಟ್ಟವರಿಗೆ ಪಿತ್ರಾರ್ಜಿತ ಆಸ್ತಿಯಲ್ಲಿ ಪಾಲು ನೀಡಬೇಕು ಹಾಗೂ ಮೊಕದ್ದಮೆ ಹೂಡಿದರೆ ಆಸ್ತಿ ವಾಪಸ್ ಪಡೆಯಬಹುದು ಎಂಬ ನಿಯಮವಿದೆ.
ತಂದೆ ಆಸ್ತಿಯನ್ನು ಮಾರಾಟ ಮಾಡಿದರೆ, ಮಾರಾಟ ಮಾಡಿದ ದಿನಾಂಕದಿಂದ 3 ವರ್ಷಗಳೊಳಗೆ ಅವರು ಮೊಕದ್ದಮೆ ಹೂಡಿದರೆ, ಅವರಿಗೆ ಬರಬೇಕಾದ ಆಸ್ತಿಯನ್ನು ಪಡೆಯುವ ಹಕ್ಕು ಇರುತ್ತದೆ. ಮಕ್ಕಳ ವಯಸ್ಸು 16, 17 ಆಗಿದ್ದರೆ, 18 ವರ್ಷ ಪೂರ್ಣಗೊಂಡ ನಂತರ, ತಂದೆ ಆಸ್ತಿಯನ್ನು ಮಾರಾಟ ಮಾಡಿದ 3 ವರ್ಷಗಳ ಒಳಗೆ, ತಂದೆಯ ವಿರುದ್ಧ ಮೊಕದ್ದಮೆ ಹೂಡಬಹುದು. ಅಂದರೆ ಆಸ್ತಿಯನ್ನು ಮತ್ತೊಬ್ಬರಿಗೆ ಮಾರಾಟ ಮಾಡಿದ 1,095 ದಿನಗಳಲ್ಲಿ ದಾವೆ ಹೂಡಿದರೆ ನ್ಯಾಯ ಸಿಗುತ್ತದೆ. ಆಸ್ತಿಯನ್ನು ಮಾರಾಟ ಮಾಡಲು ಅಗತ್ಯವಿದ್ದರೆ, ಆಸ್ತಿಯ ಮಾರಾಟಕ್ಕಾಗಿ ಸಲ್ಲಿಸಿದ ಮೊಕದ್ದಮೆಯನ್ನು ತಿರಸ್ಕರಿಸಲಾಗುತ್ತದೆ.
ಅದೇನೆಂದರೆ ಪೂರ್ವಜರ ಋಣ, ಮಕ್ಕಳ ವಿದ್ಯಾಭ್ಯಾಸ ಮತ್ತಿತರ ಕಾರಣಗಳನ್ನು ಮುಂದಿಟ್ಟುಕೊಂಡು ಮಕ್ಕಳ ಒಪ್ಪಿಗೆ ಇಲ್ಲದೇ ಆಸ್ತಿಯನ್ನು ಮಾರಾಟ ಮಾಡಿದರೆ ಆ ಮಕ್ಕಳಿಗೆ ತಂದೆಯ ವಿರುದ್ಧ ಮತ್ತೆ ಆಸ್ತಿಯನ್ನು ಕೇಳುವ ಹಕ್ಕು ಇರುವುದಿಲ್ಲ. ಹಾಗಾಗಿ ಮಕ್ಕಳು ಚಿಕ್ಕವರಿದ್ದಾಗ ತಂದೆ ಪಿತ್ರಾರ್ಜಿತ ಆಸ್ತಿಯನ್ನು ಮಾರಿದರೂ ಮೊಕದ್ದಮೆ ಹೂಡಿ ಆಸ್ತಿಯನ್ನು ಹಿಂಪಡೆಯುವ ಹಕ್ಕು ಇದೆ ಎಂದು ಹೇಳಬಹುದು. ಹಾಗಾಗಿ, ಆಸ್ತಿ ಮಾರಾಟವಾದ ದಿನಾಂಕದಿಂದ ಮೂರು ವರ್ಷಗಳ ಅವಧಿಯಲ್ಲಿ ಪ್ರಕರಣವನ್ನು ದಾಖಲಿಸಿದರೆ, ಆಸ್ತಿಯನ್ನು ಸಹ ಹಿಂತಿರುಗಿಸಲಾಗುತ್ತದೆ.