Govt Schemes: ನಿಮ್ಮ ಬಳಿ ರೇಷನ್ ಕಾರ್ಡ್ ಇದ್ರೆ ಸಾಕು ಈ ಸರ್ಕಾರಿ ಯೋಜನೆಗಳನ್ನ ಉಚಿತವಾಗಿ ಪಡೆಯಬಹುದು!
ಬಡ ಮತ್ತು ಮಧ್ಯಮ ವರ್ಗದ ಜನರಿಗೆ ಸರ್ಕಾರದ ಯೋಜನೆಗಳನ್ನು ನೇರವಾಗಿ ತಲುಪಿಸಲು ಕೇಂದ್ರ ಸರ್ಕಾರ ಪಡಿತರ ಚೀಟಿಯನ್ನು ಜಾರಿಗೆ ತಂದಿದೆ. ಈಗಲೂ ಎಲ್ಲರಿಗೂ ಪಡಿತರ ಚೀಟಿ ಮೂಲಕ ಹಲವು ಯೋಜನೆಗಳು ಮತ್ತು ಪಡಿತರ ಸಿಗುತ್ತಿದೆ. ಪಡಿತರ ಚೀಟಿ (Ration Card) ಮೂಲಕ ಸರ್ಕಾರದಿಂದ ಜಾರಿಗೆ ತಂದ ಈ ಕೆಳಗಿನ ಯೋಜನೆಗಳನ್ನು ನೀವು ಪಡೆಯಬಹುದು, ಈ ಬಗ್ಗೆ ಮಾಹಿತಿ ಪಡೆಯೋಣ.
- ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆ (PM Fasal Bima Yojana) ಪಡಿತರ ಚೀಟಿಯ ಮೂಲಕ ಪಡೆಯಬಹುದು ಮತ್ತು ಅತಿವೃಷ್ಟಿ ಅಥವಾ ಅನಾವೃಷ್ಟಿಯಿಂದ ರೈತರು ತಮ್ಮ ಬೆಳೆಗಳನ್ನು ಕಳೆದುಕೊಂಡರೆ ಈ ಯೋಜನೆಯ ಮೂಲಕ ಪರಿಹಾರವನ್ನು ಪಡೆಯಬಹುದು. ನೀವು ವಿಮಾ ಪ್ರೀಮಿಯಂನ 50% ಮಾತ್ರ ಪಾವತಿಸಬೇಕು ಮತ್ತು ಉಳಿದ 50% ಕೇಂದ್ರ ಸರ್ಕಾರವು ಪಾವತಿಸುತ್ತದೆ. ಈ ಯೋಜನೆಯಡಿಯಲ್ಲಿ, ವಿಮೆಯು 2 ಲಕ್ಷದವರೆಗೆ ಕವರ್ ಮಾಡಬಹುದು.
- 2016 ರಿಂದ ಪ್ರಾರಂಭವಾಗಿರುವ ಪ್ರಧಾನ ಮಂತ್ರಿ ಉಜ್ವಲ ಯೋಜನೆ (PM Ujjwala Yojana) ಅಡಿಯಲ್ಲಿ ಮನೆ ಮಹಿಳೆಯರಿಗೆ ಗ್ಯಾಸ್ ಸಿಲಿಂಡರ್ ಸಂಪರ್ಕವನ್ನು (LPG Cylinder Connection) ನೀಡಲಾಗುತ್ತಿದೆ ಮತ್ತು ಈ ಯೋಜನೆಯಡಿ ಗ್ಯಾಸ್ ಸಿಲಿಂಡರ್ ಅನ್ನು ಸಬ್ಸಿಡಿ ದರದಲ್ಲಿ ನೀಡಲಾಗುತ್ತಿದೆ.
- ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆ (PM Vishwakarma Yojana) ಅಡಿಯಲ್ಲಿ ಕುಶಲಕರ್ಮಿಗಳಿಗೆ ಅವರ ಕೌಶಲ್ಯದ ತರಬೇತಿ ನೀಡಲಾಗುತ್ತದೆ. ಈ ಸಂದರ್ಭದಲ್ಲಿ ದಿನಕ್ಕೆ 500 ರೂ.ಗಳ ಸಹಾಯಧನವನ್ನೂ ನೀಡಲಾಗುತ್ತದೆ. ಇದರ ನಂತರ, ಮೊದಲ ಹಂತದಲ್ಲಿ 1 ಲಕ್ಷದವರೆಗೆ ಸಾಲ ಸೌಲಭ್ಯವನ್ನು ನೀಡಲಾಗುತ್ತದೆ. ಈ ಸಾಲವನ್ನು ಕೇವಲ ಐದು ಶೇಕಡಾ ಬಡ್ಡಿದರದಲ್ಲಿ ನೀಡಲಾಗುತ್ತದೆ. ಎರಡನೇ ಹಂತದಲ್ಲಿ 2 ಲಕ್ಷ ರೂ.ವರೆಗೆ ನೀಡಲಾಗುತ್ತದೆ.
- 18 ರಿಂದ 59 ವರ್ಷದೊಳಗಿನ ಅಸಂಘಟಿತ ವಲಯದ ಕಾರ್ಮಿಕರಿಗೆ ಶ್ರಮಿಕ ಕಾರ್ಡ್ ಯೋಜನೆಯನ್ನು ಸಹ ಈ ಮೂಲಕ ಪಡೆಯಬಹುದು. ಇದು ನಿಮ್ಮ ಮಕ್ಕಳ ವಿದ್ಯಾಭ್ಯಾಸ ಮದುವೆ ಮತ್ತು ಇತರ ಬೆಂಬಲ ಕಾರ್ಯಗಳಿಗೆ ಸಹಾಯ ಮಾಡುವುದಲ್ಲದೆ 60 ವರ್ಷಗಳ ನಂತರ ನಿಮಗೆ ಪಿಂಚಣಿಯನ್ನು ನೀಡುತ್ತದೆ.
- ಕೇಂದ್ರ ಸರ್ಕಾರವು ನೀಡುವ ಉಚಿತ ಹೋಳಿ ಮಿಷನ್ ವಿತರಣೆ ಯೋಜನೆಗೆ ಪಡಿತರ ಚೀಟಿ ಪ್ರಮುಖ ಅವಶ್ಯಕತೆಯಾಗಿದೆ. ಮಹಿಳೆಯರಿಗೆ ಸ್ವಾವಲಂಬಿ ಬದುಕು ನೀಡಲು ಸಹಕಾರಿಯಾಗಿದೆ.
- ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಡಿ ರೈತರಿಗೆ ವರ್ಷಕ್ಕೆ ರೂ.6000 ಸಬ್ಸಿಡಿ ನೀಡುವಂತಹ ಕೆಲಸವನ್ನು ಕೇಂದ್ರ ಸರ್ಕಾರ ಮಾಡುತ್ತಿದೆ. ತಲಾ ಎರಡು ಸಾವಿರ ರೂಪಾಯಿಯಂತೆ ಮೂರು ಕಂತುಗಳಲ್ಲಿ ನೇರವಾಗಿ ರೈತರ ಖಾತೆಗೆ ಜಮಾ ಮಾಡಲಾಗುತ್ತದೆ.
- ಕೊನೆಗೂ ನಿಮಗೆಲ್ಲ ಗೊತ್ತಿರುವ ಹಾಗೆ ಕೇಂದ್ರ ಸರ್ಕಾರ ಪಡಿತರ ಚೀಟಿ ಮೂಲಕ 5 ಕೆಜಿ ಅಕ್ಕಿಯನ್ನು ಉಚಿತವಾಗಿ ನೀಡುತ್ತಿದೆ. ಪ್ರತಿಯೊಬ್ಬರ ಮನೆಗೂ ಉಚಿತ ಪಡಿತರ ಸಿಗಬೇಕು ಎಂಬ ಉದ್ದೇಶದಿಂದ ಇದನ್ನು ಜಾರಿಗೊಳಿಸಲಾಗಿದೆ.