Crop Compensation Money: ಬೆಳೆ ಪರಿಹಾರ ಇನ್ನೂ ಬಂದೇ ಇಲ್ಲ ಅಂತ ಇದಿರಾ! ಯಾವಾಗ ಬರುತ್ತೆ ಅಂತ ತಿಳಿಯಿರಿ.
ರೈತರ ಸಂಕಷ್ಟಕ್ಕೆ ಪರಿಹಾರ ಹಾಗೂ ಆರ್ಥಿಕ ನೆರವು ನೀಡಲು ಸರಕಾರ ಹಲವು ಯೋಜನೆಗಳನ್ನು ರೂಪಿಸುತ್ತಿದೆ. ಅದೇ ರೀತಿ ಈ ಭಾರಿ ಬೆಳೆ ನಷ್ಟದಿಂದ ರೈತರು ಮಳೆಯಿಲ್ಲದೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೇಂದ್ರ ಹಾಗೂ ರಾಜ್ಯ ಸರಕಾರಗಳು ರೈತರ ನೆರವಿಗೆ ಸದಾ ಮುಂದಿದ್ದು, ಅತಿವೃಷ್ಟಿ ಅಭಾವದಿಂದ ರೈತರ ಪರಿಸ್ಥಿತಿ ಅತ್ಯಂತ ಶೋಚನೀಯವಾಗಿದೆ.
ರಾಜ್ಯ ಹಾಗೂ ಕೇಂದ್ರ ಸರ್ಕಾರದ ಸಹಯೋಗದಲ್ಲಿ ನಷ್ಟ ಅನುಭವಿಸಿರುವ ರೈತರಿಗೆ ಬರ ಪರಿಹಾರ ನೀಡಲು ಮುಂದಾಗಿದೆ. ಈಗಾಗಲೇ ರಾಜ್ಯ ಸರ್ಕಾರದಿಂದ ಮೊದಲ ಕಂತಿನ ಹಣ ಬಿಡುಗಡೆಯಾಗಿದ್ದು, ಅತಿ ಶೀಘ್ರದಲ್ಲಿ ಕೇಂದ್ರ ಸರ್ಕಾರ ಬಿಡುಗಡೆ ಮಾಡಲಿದೆ.
ರಾಜ್ಯ ಸರಕಾರ ಈಗಾಗಲೇ ರೈತರ ಖಾತೆಗೆ 2 ಸಾವಿರ ರೂ.ಬೆಳೆ ಪರಿಹಾರದ (Crop Compensation Money) ಹಣ ಬಿಡುಗಡೆ ಮಾಡಿದ್ದು, ಕೆಲ ರೈತರಿಗೆ ಒಂದು ಕಂತು ಕೂಡ ಬಂದಿಲ್ಲ. ಇದಕ್ಕೆ ಕಾರಣವೇನು ಎಂಬುದನ್ನು ರೈತರು ಮೊದಲು ಪರಿಶೀಲಿಸಬೇಕು.
- ರೈತರು ಮೊದಲು ತಮ್ಮ ಆಧಾರ್ ಕಾರ್ಡ್ ಅನ್ನು ನವೀಕರಿಸಬೇಕು.
- ಅದೇ ರೀತಿ ಪಹಣಿ ಪತ್ರಕ್ಕೆ ಆಧಾರ್ ಕಾರ್ಡ್ ಲಿಂಕ್ ಮಾಡಬೇಕು
- ನಿಮ್ಮ ಬಳಿ ಗುರುತಿನ ಪುರಾವೆ ಇಲ್ಲದಿದ್ದರೆ ತಕ್ಷಣವೇ ಎಫ್ ಐಡಿ ಪುರಾವೆ ಪಡೆಯಿರಿ. ಇದನ್ನು ರೈತ ಸಂಪರ್ಕ ಕೇಂದ್ರ ಅಥವಾ ಕೃಷಿ ಇಲಾಖೆಯಲ್ಲಿ ಮಾಡಬಹುದು.
- ನಿಮ್ಮ ಬ್ಯಾಂಕ್ ಖಾತೆಯು ಸಕ್ರಿಯವಾಗಿಲ್ಲದಿದ್ದರೆ, KYC ಪ್ರಕ್ರಿಯೆಯು ಪೂರ್ಣಗೊಳ್ಳದಿದ್ದರೆ, ಬೆಳೆ ಪರಿಹಾರದ ಮೊತ್ತವನ್ನು ನಿಮ್ಮ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುವುದಿಲ್ಲ. ಆದ್ದರಿಂದ ಮೊದಲು ಈ ಕೆಲಸವನ್ನು ಮಾಡಿ.
ಈಗ ಕೇಂದ್ರ ಸರ್ಕಾರ 3,454 ಕೋಟಿ ಬರ ಪರಿಹಾರ ಘೋಷಣೆ ಮಾಡಿದೆ. ಇದನ್ನು ಕೂಡ ಶೀಘ್ರದಲ್ಲೇ ಅರ್ಹ ರೈತರ ಖಾತೆಗೆ ಜಮಾ ಮಾಡಲಾಗುವುದು. ಸಣ್ಣ ರೈತರಿಗೆ ಈಗಾಗಲೇ 3000 ರೂ.ಗಳನ್ನು ನೀಡಲಾಗಿದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ. ಸರಕಾರದಿಂದ ಹಂತಹಂತವಾಗಿ ಪರಿಹಾರ ಧನ ಜಮಾ ಆಗುತ್ತಿದ್ದು, ಬರ ಪರಿಹಾರಕ್ಕೆ ಸಂಬಂಧಿಸಿದಂತೆ ಗೊಂದಲಗಳಿದ್ದರೆ ಕೂಡಲೇ ಸಮೀಪದ ಕೃಷಿ ಇಲಾಖೆಗೆ ಭೇಟಿ ನೀಡಿ.