BPL Card: ಮೊದಲು ಈ 10 ಜಿಲ್ಲೆಗಳಿಗೆ ಸಿಗಲಿದೆ ಬಿಪಿಎಲ್ ಕಾರ್ಡ್! ಬಿಪಿಎಲ್ ಕಾರ್ಡ್ ಗೆ ಕಾದು ಕುಳಿತಿರುವವರು ನೋಡಿ.

BPL Card: ಮೊದಲು ಈ 10 ಜಿಲ್ಲೆಗಳಿಗೆ ಸಿಗಲಿದೆ ಬಿಪಿಎಲ್ ಕಾರ್ಡ್! ಬಿಪಿಎಲ್ ಕಾರ್ಡ್ ಗೆ ಕಾದು ಕುಳಿತಿರುವವರು ನೋಡಿ.

ರಾಜ್ಯದಲ್ಲಿ ಬಿಪಿಎಲ್ ಕಾರ್ಡ್ ಪಡೆಯಲು ಕಾಯುತ್ತಿರುವವರೇ ಹೆಚ್ಚು. ಹೌದು, ಇಂದು ರಾಜ್ಯದಲ್ಲಿ ಬಿಪಿಎಲ್ ಕಾರ್ಡ್ ಗೆ ಬೇಡಿಕೆ ಹೆಚ್ಚಾಗಿದ್ದು, ಈ ಕಾರ್ಡ್ ದೊರೆತರೆ ಮಾತ್ರ ಸರ್ಕಾರದ ಸೌಲಭ್ಯಗಳೂ ದೊರೆಯಲಿವೆ. ಆದರೆ ಹೊಸ ಮನೆ ಮಾಡಿದವರು, ಹೊಸದಾಗಿ ಮದುವೆಯಾದವರು ಪಡಿತರ ಚೀಟಿಗೆ ಅರ್ಜಿ ಸಲ್ಲಿಸಲು ಅವಕಾಶವಿರಲಿಲ್ಲ. ಚುನಾವಣೆ ಹಿನ್ನೆಲೆಯಲ್ಲಿ ಅರ್ಜಿ ಸಲ್ಲಿಕೆ ಸ್ಥಗಿತಗೊಂಡಿದೆ.

ಆ ಬಳಿಕ ಹೊಸ ಪಡಿತರ ಚೀಟಿಗೆ ಅರ್ಜಿ ಆಹ್ವಾನಿಸಲು ಸರ್ಕಾರ ಅನುಮತಿ ನೀಡಿದೆ. ಹೌದು ಜು. 2 ಮತ್ತು 3ರಂದು ಮಾತ್ರ ಅರ್ಜಿ ಸಲ್ಲಿಕೆಗೆ ಅವಕಾಶ ಕಲ್ಪಿಸಲಾಗಿತ್ತು. ಹೀಗಾಗಿ ಕೆಲವರು ಕರ್ನಾಟಕ ಒನ್, ಗ್ರಾಮ ಒನ್ ಕೇಂದ್ರದಲ್ಲಿ ಅರ್ಜಿ ಸಲ್ಲಿಸಿದ್ದಾರೆ.

BPL Card

ತಿದ್ದುಪಡಿಗೂ ಅವಕಾಶ ನೀಡಲಾಗಿದೆ. ಗೃಹ ಲಕ್ಷ್ಮೀ ಯೋಜನೆಯ 2000 ಪಡೆಯಲು ಈಗಾಗಲೇ ಪಡಿತರ ಚೀಟಿ ಕಡ್ಡಾಯವಾಗಿದೆ. ಪಡಿತರ ಚೀಟಿ ಇಲ್ಲದ ಕಾರಣ ಅನೇಕ ಮಹಿಳೆಯರು ಗೃಹಲಕ್ಷ್ಮಿ ಯೋಜನೆಯಿಂದ ವಂಚಿತರಾಗಿದ್ದಾರೆ. ಪಡಿತರ ಚೀಟಿ ಇಲ್ಲದೇ ಕೆಲವರಿಗೆ ಅನ್ನಭಾಗ್ಯದ ಹಣವೂ ಸಿಗುತ್ತಿಲ್ಲ. ಹಾಗಾಗಿ ಸರ್ಕಾರವೂ ಅರ್ಜಿ ವಿಲೇವಾರಿ ಮಾಡಲು ನಿರ್ಧರಿಸಿದೆ.

ಈ ಹಿಂದೆ ಅರ್ಜಿ ಸಲ್ಲಿಸಿರುವ ಹಳೆಯ ಕಾರ್ಡ್‌ಗಳು ವಿತರಣೆಗೆ ಬಾಕಿ ಉಳಿದಿವೆ. ಹಿಂದಿನ ಅರ್ಜಿ ಇತ್ಯರ್ಥವಾಗಿಲ್ಲ. ಹಾಗಾಗಿ ಇವುಗಳನ್ನು ವಿತರಿಸಲು ಸರಕಾರವೂ ಸಿದ್ಧವಾಗಿದೆ. ಈಗಾಗಲೇ 2.35 ಲಕ್ಷ ಹೊಸ ಅರ್ಜಿಗಳು ವಿಲೇವಾರಿಗೆ ಬಾಕಿ ಇದ್ದು, ಅರ್ಜಿ ವಿಲೇವಾರಿ ಮಾಡಲಾಗುವುದು. ಆರೋಗ್ಯ ಸಮಸ್ಯೆಯಿಂದ ತುರ್ತು ಪಡಿತರ ಚೀಟಿ ಇದ್ದರೆ, ವಾರದೊಳಗೆ ಹೊಸ ಕಾರ್ಡ್ ನೀಡಲು ಸರ್ಕಾರವೂ ಮುಂದಾಗಿದೆ.

ಇದೀಗ ಎರಡು ದಿನಗಳ ಹಿಂದೆ ಹೊಸ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಿದ್ದು, ಜಿಲ್ಲೆಯಲ್ಲಿ ಹಳೆ ಅರ್ಜಿಯೇ ಬಾಕಿ ಉಳಿದಿದ್ದು, ಬಾಕಿ ಇರುವ ಕಾರ್ಡ್ ನೀಡಿದ ನಂತರವೇ ಹೊಸ ಪಡಿತರ ಚೀಟಿ ನೀಡಲಾಗುವುದು. ಇದೀಗ ಎರಡು ದಿನಗಳ ಹಿಂದೆ ಹೊಸ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಿದ್ದು, ಜಿಲ್ಲೆಯಲ್ಲಿ ಹಳೆ ಅರ್ಜಿಯೇ ಬಾಕಿ ಉಳಿದಿದ್ದು, ಬಾಕಿ ಇರುವ ಕಾರ್ಡ್ ನೀಡಿದ ನಂತರವೇ ಹೊಸ ಪಡಿತರ ಚೀಟಿ ನೀಡಲಾಗುವುದು.