ACC Cement: ಹೊಸ ಮನೆ ಕಟ್ಟುವವರಿಗೆ ಗುಡ್ ನ್ಯೂಸ್! ಒಂದೇ ಬಾರಿ ತುಂಬಾ ಕುಸಿದ ACC ಸಿಮೆಂಟ್ ಬೆಲೆ. ಎಷ್ಟು ಅಂತ ನೋಡಿ.
ಸ್ನೇಹಿತರೇ, ನಿಮಗೆಲ್ಲರಿಗೂ ತಿಳಿದಿರುವಂತೆ ಮನೆ ಕಟ್ಟುವುದು ಬಹಳ ಮುಖ್ಯವಾದ ಕೆಲಸ ಮತ್ತು ಈಗಲೂ ಅದನ್ನು ಮಾಡುವುದು ತುಂಬಾ ಕಷ್ಟ ಎಂದು ಹೇಳಬಹುದು. ಮನೆ ಕಟ್ಟಲು ಬಳಸುವ ಸಾಮಾಗ್ರಿಗಳ ಬೆಲೆ ಏರಿಕೆಯಿಂದಾಗಿ ಮನೆ ಕಟ್ಟುವುದು ಅಷ್ಟು ಸುಲಭವಲ್ಲ. ಸ್ಥಿತಿವಂತರೂ ಸಾಲ ಮಾಡಿ ಮನೆ ಕಟ್ಟಿಕೊಳ್ಳಲು ಎದುರು ನೋಡುತ್ತಿದ್ದಾರೆ.
ಮನೆ ಕಟ್ಟಲು ಸಾಲ (ಹೋಮ್ ಲೋನ್) ಮಾಡಬೇಕಾದರೆ ಹಿಂದೆ-ಮುಂದೆ ನೋಡಬೇಕು ಹಾಗಾಗಿ ಮನೆ ಕಟ್ಟುವಂತಹ ವಸ್ತುಗಳ ಬೆಲೆ ಏರಿಕೆಯ ಮಟ್ಟ ಎಷ್ಟಿದೆ ಎಂದು ಯೋಚಿಸಬಹುದು. ಅದರಲ್ಲೂ ಮನೆ ಕಟ್ಟಲು ಸಿಮೆಂಟ್ ಪ್ರಮುಖ ವಸ್ತು ಎಂದು ನಿಮಗೆಲ್ಲರಿಗೂ ಗೊತ್ತು.
ಮನೆ ಕಟ್ಟಲು ಉತ್ತಮ ಗುಣಮಟ್ಟದ ಸಿಮೆಂಟ್ ಖರೀದಿಸುವುದು ಬಹಳ ಮುಖ್ಯ. ಅದರಲ್ಲೂ ಇಂದಿನ ಲೇಖನದ ಮೂಲಕ ನಾವು ನಿಮಗೆ ಹೇಳಲು ಹೊರಟಿರುವುದು ಹಲವು ವರ್ಷಗಳಿಂದ ಭಾರತದ ನಿರ್ಮಾಣ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಉದ್ಯೋಗಿಗಳ ನಂಬಿಕೆಯಾಗಿರುವ ಎಸಿಸಿ ಸಿಮೆಂಟ್ ಬಗ್ಗೆ. ಕೇವಲ ಹಣದ ಮುಖ ನೋಡಿ ಮನೆ ಕಟ್ಟಲು ಸಾಧ್ಯವಿಲ್ಲ. ಗುಣಮಟ್ಟದ ವಸ್ತುಗಳನ್ನು ಹುಡುಕುವುದು ಮತ್ತು ನಂತರ ಮನೆ ನಿರ್ಮಿಸಲು ಯೋಜನೆಯನ್ನು ಮಾಡುವುದು ಬಹಳ ಮುಖ್ಯ.
ಎಸಿಸಿ ಸಿಮೆಂಟ್ ಬಹುತೇಕ ಎಲ್ಲರೂ ಗುಣಮಟ್ಟದ ಮನೆ ನಿರ್ಮಾಣಕ್ಕೆ ಬಳಸುವ ಸಿಮೆಂಟ್ ಆಗಿದೆ. ಎಸಿಸಿ ಸಿಮೆಂಟ್ ಬಹುತೇಕ ಎಲ್ಲಾ ಪ್ರದೇಶಗಳಲ್ಲಿ ಜನಪ್ರಿಯವಾಗಿರುವ ಸಿಮೆಂಟ್ ಆಗಿದ್ದು, ಇದರ ಬೆಲೆ ಬರೋದಾದ್ರೆ 43 ಒಪಿಸಿ ದರ್ಜೆಯ ಗುಣಮಟ್ಟದ ಎಸಿಸಿ ಸಿಮೆಂಟ್ ಚೀಲಕ್ಕೆ 425 ರಿಂದ 435 ರೂಪಾಯಿಗಳು ಎಂದು ತಿಳಿದುಬಂದಿದೆ. ಮತ್ತಷ್ಟು ಕುಸಿಯುವ ಸಾಧ್ಯತೆಯೂ ಇದೆ ಎನ್ನಲಾಗಿದೆ.
ಹಾಗಾಗಿ ಗುಣಮಟ್ಟದ ಮನೆ ಕಟ್ಟಬೇಕೆಂದರೆ ಈ ಸಿಮೆಂಟ್ ಖರೀದಿಸುವುದು ಉತ್ತಮ ಎಂದು ನಿಸ್ಸಂದೇಹವಾಗಿ ಹೇಳಬಹುದು. ಯಾವುದೇ ಕಾರಣಕ್ಕೂ ಉತ್ತಮ ಗುಣಮಟ್ಟದ ಮನೆ ನಿರ್ಮಾಣದ ಬೆಲೆಯಲ್ಲಿ ರಾಜಿ ಮಾಡಿಕೊಳ್ಳುವುದು ಸರಿಯಲ್ಲ. ಇದರ ಮೂಲಕ ನೀವು ಎಸಿಸಿ ಸಿಮೆಂಟ್ ಬೆಲೆಯನ್ನು ತಿಳಿದುಕೊಳ್ಳಬಹುದು ಮತ್ತು ನೀವು ಮಾನ್ಯವಾದ ನಿರ್ಮಾಣ ಕಾರ್ಯ ಯೋಜನೆಯನ್ನು ಹೊಂದಿದ್ದರೆ ಈ ಮಾಹಿತಿಯು ನಿಮಗೆ ಉಪಯುಕ್ತವಾಗಿರುತ್ತದೆ.