HSRP Number Plate: HSRP ನಂಬರ್ ಪ್ಲೇಟ್ ಹಾಕಿಸದೆ ಇರೋರಿಗೆ ದಂಡ ವಿಧಿಸುವ ಬಗ್ಗೆ ಬಂತು ಹೊಸ ಆದೇಶ! ತಿಳಿಯಿರಿ.

HSRP Number Plate: HSRP ನಂಬರ್ ಪ್ಲೇಟ್ ಹಾಕಿಸದೆ ಇರೋರಿಗೆ ದಂಡ ವಿಧಿಸುವ ಬಗ್ಗೆ ಬಂತು ಹೊಸ ಆದೇಶ! ತಿಳಿಯಿರಿ.

ರಾಜ್ಯ ಸಾರಿಗೆ ಇಲಾಖೆ ಪ್ರಕಾರ ಮೇ 31ರೊಳಗೆ ಎಚ್‌ಎಸ್‌ಆರ್‌ಪಿ ನಂಬರ್‌ ಪ್ಲೇಟ್‌ ಅಳವಡಿಸಲಾಗಿದ್ದು, ಜೂನ್‌ 1ರ ನಂತರ ವಾಹನಗಳಿಗೆ ಎಚ್‌ಎಸ್‌ಆರ್‌ಪಿ ನಂಬರ್‌ ಪ್ಲೇಟ್‌ ಅಳವಡಿಸದಿದ್ದರೆ ಭಾರಿ ದಂಡ ವಿಧಿಸುವ ಬಗ್ಗೆಯೂ ಚರ್ಚೆ ನಡೆದಿದೆ. ಆದರೆ ಈಗ ಈ ವಿಚಾರದ ಬಗ್ಗೆ ಹೈಕೋರ್ಟಿನಿಂದ ಬೇರೆ ರೀತಿಯಲ್ಲಿ ಸುದ್ದಿ ಕೇಳಿದ್ದೀರಿ ಮತ್ತು ನೀವು ಇದನ್ನು ಬಹಳ ಮುಖ್ಯವೆಂದು ತಿಳಿದುಕೊಳ್ಳಬೇಕು. ಹೀಗಾಗಿ ಹೈ ಸೆಕ್ಯುರಿಟಿ ನಂಬರ್ ಪ್ಲೇಟ್ ಕುರಿತು ಹೈಕೋರ್ಟ್ ಯಾವ ರೀತಿಯ ಆದೇಶ ನೀಡಿದೆ ಎಂಬಿತ್ಯಾದಿ ಸಂಪೂರ್ಣ ಮಾಹಿತಿ ಪಡೆಯೋಣ.

HSRP Number Plate

ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್‌ಗಳನ್ನು ಅಳವಡಿಸಿಕೊಳ್ಳದಿದ್ದರೆ ಜುಲೈ 4ರವರೆಗೆ ಯಾವುದೇ ರೀತಿಯ ದಂಡ ವಿಧಿಸಬಾರದು ಎಂದು ಸಂಚಾರ ಪೊಲೀಸರಿಗೆ ಹೈಕೋರ್ಟ್ ಆದೇಶಿಸಿದೆ ಎಂದು ತಿಳಿದು ಬಂದಿದೆ. ಲಭ್ಯ ಮಾಹಿತಿ ಪ್ರಕಾರ ಎರಡು ಕೋಟಿಗೂ ಹೆಚ್ಚು ವಾಹನಗಳ ಪೈಕಿ 35ರಿಂದ 40 ಲಕ್ಷ ವಾಹನಗಳು ಮಾತ್ರ ಎಚ್‌ಎಸ್‌ಆರ್‌ಪಿ ನಂಬರ್‌ ಪ್ಲೇಟ್‌ಗೆ ನೋಂದಣಿಯಾಗಿವೆ.

ಅದೇ ರೀತಿ ಹಳೆ ವಾಹನಗಳಿಗೆ ಎಚ್‌ಎಸ್‌ಆರ್‌ಪಿ ನಂಬರ್‌ ಪ್ಲೇಟ್‌ ಅಳವಡಿಕೆ ಕುರಿತು ಹೈಕೋರ್ಟ್‌ನಲ್ಲಿ ಮೊಕದ್ದಮೆ ಹೂಡಿರುವ ಪ್ರಕರಣವನ್ನು ಆರಂಭದಲ್ಲಿ ಜೂ.12 ಕೊನೆಯ ದಿನಾಂಕವೆಂದು ಪರಿಗಣಿಸಿ ನಂತರ ಜುಲೈ 4ರವರೆಗೆ ವಿಸ್ತರಿಸಲಾಗಿದೆ.

ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್‌ಗಳ ಅಳವಡಿಕೆ ವಿರುದ್ಧ ಬಿಎನ್‌ಡಿ ಎನರ್ಜಿ ಲಿಮಿಟೆಡ್ ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿರುವ ಕಾರಣ ಇದೀಗ ದಿನಾಂಕವನ್ನು ನಿಗದಿಪಡಿಸಲಾಗಿದೆ ಎಂದು ತಿಳಿದುಬಂದಿದೆ. ಈಗ ಬಂದಿರುವ ಹೊಸ ಆದೇಶದ ಪ್ರಕಾರ ಜುಲೈ 4 ರೊಳಗೆ ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಅನ್ನು ನೋಂದಾಯಿಸುವುದು ಬಹಳ ಮುಖ್ಯ.

ಕೆಲ ಹಳೆ ವಾಹನ ಕಂಪನಿಗಳ ವಾಹನ ನೋಂದಣಿಯನ್ನು ಹೇಗೆ ಮಾಡಬೇಕು ಎಂಬ ಬಗ್ಗೆ ಸದ್ಯದಲ್ಲಿಯೇ ಇಲಾಖೆ ಪರಿಹಾರ ಜಾರಿಗೆ ತರುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ. ಜುಲೈ 4ರ ನಂತರ ಎಚ್‌ಎಸ್‌ಆರ್‌ಪಿ ನಂಬರ್‌ ಪ್ಲೇಟ್‌ ಇಲ್ಲದ ವಾಹನಗಳನ್ನು ಹಿಡಿದಿಟ್ಟು ಭಾರಿ ದಂಡ ವಿಧಿಸಲಾಗುವುದು ಎಂದೂ ವರದಿಯಾಗಿದೆ. ಹೀಗಾಗಿ ಹೈಕೋರ್ಟ್ ಆದೇಶದಂತೆ ಜುಲೈ 4ರೊಳಗೆ ಹೈ ಸೆಕ್ಯುರಿಟಿ ನಂಬರ್ ಪ್ಲೇಟ್ ಅಳವಡಿಕೆ ಪೂರ್ಣಗೊಳಿಸಿ.